ನನ್ನ 'ಸು' ಗೆ,
ಗೆಳತೀ.. ಪ್ರಕೃತಿಯಲ್ಲಿ ಮೌನ ಮಾತಾಡುತ್ತದೆ ಅನ್ನೋದು ನಿಜ ಅನಿಸಿದ್ದು ಆ ಎರಡು ದಿನ... ನಿತ್ಯವೂ ಅವಧಾನೀ ಮಾಸ್ತರರ ಕನ್ನಡ ಕ್ಲಾಸಿಗೆ ಬಂಕ್ ಹೊಡೆಯುತ್ತಿದ್ದ 'ನಾವು' ಅಂದು ಕೇವಲ 'ನಾನಾ'ದಾಗ ನನಗೆ ಸ್ವಲ್ಪ ಕಷ್ಟ ಅನಿಸಿತ್ತು.. ನಿನಗೂ ಹಾಗೇ ಅನಿಸಿರಬೇಕು.. ಜೊತೆಗೆ ಅವರ ಪಾಠ ಕೇಳಲು ಕೂಡಾ..!! ನನಗೆ ಆ ದಿನಗಳಲ್ಲಿ ಹೆಚ್ಚು ಕೇಳಿಸುತ್ತಿದ್ದುದು ನೀನು ತೇರಿಗೆ ಹೋದಾಗ ತಂದ ಬಿಳೀ ಬಣ್ಣದ ಕಿವಿಯೋಲೆಗಳ ಸದ್ದು.. ನಿನ್ನ ಬೆಳ್ಳಿ ಗೆಜ್ಜೆಯ ಝಣ ಝಣ ಸದ್ದು ಮಾತ್ರ.. ಆದರೆ ಅವೇ ಎಲ್ಲಾ ಮಾತಾಡಿದ್ದವು.. ನಾವು ಮತ್ತೆ ಮೊದಲಿನಂತೆ ಮಾತು ಪ್ರಾರಂಭಿಸಿದಾಗಲೂ ನಮ್ಮಿಬ್ಬರಲ್ಲಿ ಹೇಳಿಕೊಳ್ಳಲು ಹೊಸವಿಷಯವೇನೂ ಇರಲಿಲ್ಲ.. ಮಾತಾಡದ ದಿನಗಳಲ್ಲಿ ವಿಶೇಷವೇನೂ ನಡೆದೇ ಇರಲಿಲ್ಲವೆಂಬಂತೆ ಮಾತು ಪ್ರಾರಂಭಿಸಿದ್ದೆವು.. ಅಂದರೆ ಆ ಎರಡೂ ದಿನ ನನ್ನೊಳಗೆ ನೀನು, ನಿನ್ನೊಳಗೆ ನಾನು ಮಾತಾಡಿಕೊಂಡಿದ್ದೆವಲ್ಲವೇನೇ..?
ಸೂರ್ಯ ಕೆಂಪಗಾಗುತ್ತಿರುವ ನಿನ್ನ ಕಣ್ಣಲ್ಲಿ ನೀರು ಕಂಡಂತಾದರೂ, ಒಪ್ಪಿಕೊಳ್ಳಲು ಮನಸಾಗಲಿಲ್ಲ.. ಅದು ನನಗೆ ಸಮುದ್ರಕ್ಕೆ ಸವಾಲೆಸೆದು ಕಣ್ಣಲ್ಲೇ ನುಂಗಿದ ನಿನ್ನ ಕಣ್ಣಿನ ನೀರಂತೆಯೂ, ಮುಳುಗುವ ಸೂರ್ಯನ ನೋಡಿ ಮುಂಬರುವ ಕತ್ತಲೆಯ ಭಯದ ಕಣ್ಣೀರಂತೆಯೂ, ಕಡಲ್ಗಾಳಿ ತಂದ ಉಸುಕಿನ ಕಣಗಳು ಕಣ್ಣೀಗೆ ಬಿದ್ದು ಬಂದ ನೀರಂತೆಯೂ ಕಾಣಿಸಿತ್ತು... ಕಾರಣ ಕೇಳಲು ಮನಸಾಗಲಿಲ್ಲ.. ಆ ಸುಂದರ ಮೌನವನ್ನು ನಾ ಪ್ರೀತಿಸುತ್ತೇನೆ ಗೆಳತೀ.. ಅದನ್ನು ಹಾಳುಮಾಡಲು ಇಷ್ಟವಿರಲಿಲ್ಲ.. ಒಮ್ಮೆಗೇ ಹತ್ತಿರ ಬಂದು ಗಟ್ಟಿಯಾಗಿ ಅಪ್ಪಿಕೊಂಡು 'ನೀನಂಗೆ ಬೇಕು' ಅಂತ ಅತ್ತಾಗ ಏನು ಮಾಡಬೇಕೆಂಬುದೇ ಅರ್ಥವಾಗಲಿಲ್ಲ.. ಸುಮ್ಮನೇ ಇದ್ದೆ.. ಅಂತಹ ಮೌನವನ್ನು ನಾನು ಪ್ರೀತಿಸುತ್ತೇನೆ ಗೆಳತೀ...
ಓದಿ ::ನನ್ನ 'ಸು' ಗೆ ...
ಬೇರೆ ವೇಷನಿತ್ಯ ಬದುಕನ್ನು ಒಂದೇ ರೀತಿಯಲ್ಲಿ ನೋಡದೆ ಬಣ್ಣದ ಕಣ್ಣುಗಳಲ್ಲಿ ನೋಡುವ ಪ್ರಯತ್ನ.ಚಿಕ್ಕ ವಿಷಯಗಳಲ್ಲಿ ಕಾಣುವ ಖುಷಿ ಖುಷಿ ವಿಚಾರಗಳನ್ನು ಹಿಡಿದಿಡುವ ಯತ್ನ.ಜಾತ್ರೆ ಪ್ರತಿ ವರ್ಷದಂತೆ..ಅದೇ ಗಲಾಟೆ ಅದೇ ಜನ.. ಸುಮ್ಮನೆ ಯಾಕೆ ಹೋಗುವುದು ಎಂದುಕೊಂಡವರಿಗೆ ಈ ಸಲದ ವಿಶೇಷ.. ಬೇರೆ ವೇಷ ಬಣ್ಣದ ತೇರುಜೀವನದ ತುಂಬಾ ಹತ್ತಿರದ ವಿನ್ಯಾಸಗಳು, ಘಟನೆಗಳು ಕಥೆಯಾಗಿ ಇಲ್ಲಿವೆ. ಸುತ್ತ ಮುತ್ತಲಿನ ವ್ಯವಹಾರಗಳೇ ಇವುಗಳಿಗೆ ಸ್ಫೂರ್ತಿ.. ಹೊಸ ಮಳೆ ಬಿದ್ದ ಮಣ್ಣಿನ ವಾಸನೆಯ ಮೂಡಿಗೆ ಸರಿಯಾಗಿ ಹೊರ ಬಂದ ಮನದ ಅಕ್ಷರಗಳಿಗೆ ಸಿಕ್ಕ ಸೂರು.. ಬಣ್ಣದ ತೇರು ಸಾಲದ ಸಾಲುನನಗಿಷ್ಟವಾದವುಗಳು.. ಇದು ರಚನೆಯಲ್ಲಿ ಸ್ವಂತದಲ್ಲದಿದ್ದರೂ ಸ್ವಂತಕ್ಕೆ ಹತ್ತಿರವಾದದ್ದು..ವಿಶಾಲ ಬದುಕಿನ ತೀರದಲ್ಲಿ ಮರಳೋ ಮರಳು.. ಕಾಲಿಟ್ಟರೆ ತಂಪಾಗುವ ಹುಗಿಯುವ ಉಸುಕಿನಲ್ಲಿ ಹೆಜ್ಜೆ ಹಾಕುವಾಗ ಜೊತೆಯಾದ ಕಾಲು.. ಸಾಲದ ಸಾಲು ತಂತ್ರ ವಿನ್ಯಾಸಕಂಪ್ಯೂಟರಿನಲ್ಲಿ ಕೀ ಕುಟ್ಟುವಾಗ ಸಿಕ್ಕಿ ಹಾಕಿಕೊಂಡ ನನಗೆ ಹೊಸದಾದ ಕೆಲವು ತಂತ್ರಗಳು ಮತ್ತು ಬಣ್ಣಗಳ ಜೊತೆ ಆಟವಾಡುವಾಗ ರೂಪುಗೊಂಡ ಕೆಲವು ವಿನ್ಯಾಸಗಳು ಇಲ್ಲಿ ಬರಬಹುದು.. ಒಂದು ಕಡೆ ಆಫೀಸಿನ ಕೆಲಸ.. ಮನೆಗೆ ಬಂದ ನಂತರ ಹೀಗೊಂದು ಸಣ್ಣ ಹವ್ಯಾಸ.. ತಂತ್ರ-ವಿನ್ಯಾಸ |
ಹೀಗೊಂದು ಪ್ರಕಟಣೆಸುಮಾರು ಐದಿಂಚು ಆರಡಿ ಉದ್ದ,ತೊಳೆದ ಗೋಧಿ ಬಣ್ಣ, ದುಂಡು ಮುಖ,ಕಂದು ಮಿಶ್ರಿತ ಕಪ್ಪು ಕಣ್ಣು,ಹೆಚ್ಚಿನ ಪಕ್ಷ ಕೈಯಲ್ಲೇ ಇರುವ ಕಣ್ಣಿಗೆ ಹಾಕುವ ಕನ್ನಡಕ, ಅತ್ಲಾಗೆ ಫ್ರೆಂಚ್ಊ ಅಲ್ಲದ ಇತ್ಲಾಗ್ ಅಫ್ಗಾನಿಸ್ತಾನವೂ ಅಲ್ಲದಂತ ಕುರುಚಲು ಗಡ್ಡ, ಕೈಯಲ್ಲೊಂದು ಕ್ಯಾಮರಾ ಚೀಲ, ಇಂತಹವನೆನಾದರೂ ನಿಮ್ಮ ಕಣ್ಣಿಗೆ ಬಿದ್ದರೆ ಅದು ನಾನಾಗಿರಬಹುದು. ಹೊನ್ನಾವರ ಎಂಬ ಉತ್ತರ ಕನ್ನಡದ ಊರಿನಿಂದ ಬಂದು ಆರ್.ವಿ. ತಾಂತ್ರಿಕ ವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಮಾಡಿ,ಕೆಲಸದಲ್ಲಿ ತಲ್ಲೀನನಾಗಿರುವಂತಹ ಈ ಸಂದರ್ಭದಲ್ಲಿ, ಆಗೀಗ ಮನಸ್ಸಿಗೆ ತಾಗಿದ್ದನ್ನು ಅಂತರ್ಜಾಲದಲ್ಲಿ ಗೀಚಲು ಈ ರೀತಿ 'ಪುಷ್ಪಾವರಣ'ದ ಸೃಷ್ಟಿಯಾಗಿದೆ.ತೀರಾ ಮೊದಲೆಲ್ಲ ಚಿತ್ರಕಲೆ,ಪಿ ಯೂ ಸಿ ಹೊತ್ತಿಗೆ ಓದು, ಇಂಜಿನಿಯರಿಂಗ್ ಸಮಯದಲ್ಲಿ ಬರಹ, ಈಗ ಕೆಲಸ ಸಿಕ್ಕ ಮೇಲೆ ಕ್ಯಾಮರಾ..ಈ ಪ್ರವೃತ್ತಿಗಳೆಲ್ಲಾ ಮೊದಮೊದಲಿಗೆ ಹವ್ಯಾಸ ಎಂದು ಶುರು ಮಾಡಿದರೂ ಅದೀಗ ಚಟವಾಗಿದೆ.. ಆಗೀಗ ಹಠವೂ ಆಗುತ್ತದೆ... ಪ್ರವರ ಇನ್ನೂ ಇದೆ |